ಪದೇ ಪದೆ ಯಶ್ ಮುಂಬೈಗೆ ಹೋಗೋದ್ಯಾ ಮುಗಿಬಿದ್ದ ಫ್ಯಾನ್ಸ್
Harish Lamani
ರಾಕಿಂಗ್ ಸ್ಟಾರ್ 'ಟಾಕ್ಸಿಕ್' ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣ ಕೂಡ ಮುಗಿದಿದೆ. ಯಶ್ ಜೊತೆ ನಯನತಾರಾ, ತನಿಕೇಲ ಭರಣಿ, ತಾರಾ ಸುತಾರ ಸೇರಿದಂತೆ ಸಾಕಷ್ಟು ಜನ ಕಲಾವಿದರು ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.ಟಾಕ್ಸಿಕ್' ಸಿನಿಮಾ ಚಿತ್ರೀಕರಣದಿಂದ ಕೊಂಚ ಯಶ್ ಬಿಡುವು ಮಾಡಿಕೊಂಡಿದ್ದಾರೆ. ಸದ್ಯ ಪತ್ನಿ ಜೊತೆ ವಾಣಿಜ್ಯ ನಗರಿ ಮುಂಬೈಗೆ ಭೇಟಿ ನೀಡಿದ್ದಾರೆ. 'KGF' ಚಾಪ್ಟರ್-1 ಸಕ್ಸಸ್ ಬಳಿಕ ಯಶ್ ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ. ಚಿತ್ರದ ಪ್ರಮೋಷನ್‌ಗೆ ಕೂಡ ಹೋಗಿದ್ದರು. ಬಳಿಕ ಕೆಲ ಕಾರ್ಯಕ್ರಮಗಳಲ್ಲಿ ಭಾಗಿ ಆಗಲು ತೆರಳಿಸಿದ್ದರು.KGF'-1 ಗೆದ್ದ ಬಳಿಕ ದೇಶ ವಿದೇಶಗಳಲ್ಲಿ ಯಶ್ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಪದೇ ಪದೆ ಯಶ್ ಮುಂಬೈಗೆ ಹೋಗೋದ್ಯಾಕೆ?